31 July 2014

Inspirational Quotes - 6


ಶಿಶು ಗೀತೆ - ೪


ತೋಟಕೆ ಹೋಗೋ ತಿಮ್ಮ
ತೋಳ ಬಂದಿತಮ್ಮ
ಹಸು ಮೇಯ್ಸೋ ತಿಮ್ಮ
ಹಸು ಹಾದಿತಮ್ಮ

ಒಲೆ ಉರಿಸೋ ತಿಮ್ಮ
ಉರಿ ಸುಟ್ಟಿತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ

ಹೂವು ಬಿಡಿಸೋ ತಿಮ್ಮ
ಹಾವು ಬಂದಿತಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ

ನೀರು ಸೇದೋ ತಿಮ್ಮ

ಕೈ ನೋವು ಅಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆನಮ್ಮ


28 July 2014

ಶಿಶು ಗೀತೆ - ೩


ಆನೆ ಬಂತೊಂದಾನೆ
ಯಾವೂರಾನೆ ?
ಬಿಜಾಪುರದಾನೆ
ಇಲ್ಲಿಗ್ಯಾಕೆ ಬಂತು ?
ದಾರಿ ತಪ್ಪಿ ಬಂತು
ಕೊಬ್ಬರಿ ಬೆಲ್ಲ ತಂತು
ಮಕ್ಳಿಗೆಲ್ಲ ಹಂಚ್ತು
ಆನೆ ಓಡಿ ಹೋಯ್ತು


ಆನೆ ಬಂತೊಂದಾನೆ
ಯಾವೂರಾನೆ ?
ಸಿದ್ಧಾಪುರದಾನೆ
ಇಲ್ಲಿಗ್ಯಾಕೆ ಬಂತು ?
ನೀರು ಕುಡಿಯಲು ಬಂತು
ಬಚ್ಚಲು ಮನೆಗೆ ಹೋಯ್ತು
ಕಾಲು ಜಾರಿ ಬಿತ್ತು
ಆನೆ ಓಡಿ ಹೋಯ್ತು

ಶಿಶು ಗೀತೆ - ೨


ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿ ಮರಿ ಕಳ್ಳ ಬಂದರೇನು ಮಾಡುವೆ
ಲೊಳ್ ಲೊಳ್ ಬೌ ಎಂದು ಕೂಗಿ ಆಡುವೆ

ನಾಯಿ ಮರಿ ನಾನು ಹೋಗಿ ತಿಂಡಿ ತರುವೆನು
ನಾ ನಿನ್ನ ಮನೆಯನ್ನು ಕಾಯುತಿರುವೆನು


ಶಿಶು ಗೀತೆ - ೧

ಡೊಳ್ಳು  ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಭಂಡ
ಹೇಳಿ ಕೇಳಿ ಹಾಕಿಸ್ಕೊಂಡು
ತಿಂದ ನೂರು ಬೋಂಡ

ಊಟ ಇವನಿಗೆ ಇಷ್ಟ
ಪಾಠ ಮಾತ್ರ ಕಷ್ಟ
ಕ್ಲಾಸಿನಲ್ಲಿ ಗೊರಕೆ ಹೊಡೆದು
ಭಾರಿ ಗುಂಡು ಆದ