06 July 2009

ಆಟೋ ಪಂಚ್ ಲೈನ್ಸ್ - ೧

ಯಾವತ್ತಾದ್ರೂ ಬೆಂಗಳೂರು ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಾಗ, ಸಿಗ್ನಲ್ ನಲ್ಲಿ ಕಾಯೋವಾಗ ಆಟೋ, ಬೈಕ್, ಕಾರ್ ಗಳ ಮೇಲೆ ಬರೆದಿರುವ ಬೆಂಕಿ ಡೈಲಾಗ್ ಗಳನ್ನು ಓದಿದ್ದೀರಾ ? ಕೆಲವರು ಕನ್ನಡ ಚಿತ್ರ/ನಟರ ಹೆಸರು ಹಾಕಿ ಕನ್ನಡ ಅಭಿಮಾನ ಮೆರಿತಾರೆ. ಕೆಲವೊಂದು ತಮಾಷೆಯಾಗಿರುತ್ತವೆ. ಕೆಲವರು ತಮ್ಮ ಪ್ರಿಯತಮೆಯ ಹೆಸರು ಕೂಗಿ ಕರೆಯುತ್ತಾರೆ. ಕೆಲವೊಂದು ಭಗ್ನ ಪ್ರೇಮಿಗಳ ಹೃದಯದ ಮಾತುಗಳಿರುತ್ತವೆ. ಮತ್ತೆ ಕೆಲವು ಫಿಲಾಸಫಿಯನ್ನು ಜನರಿಗೆ ಉಪದೇಶಿಸುವಂತಹವು.

ಇಲ್ಲಿವೆ ಓದಿ. ನಾನು ನೋಡಿ, ಓದಿ, ನೆನಪಿಟ್ಟು ಬರೆದಿರುವ ಕೆಲವು ಪಂಚ್ ಲೈನ್ ಗಳು....

ಹುಡುಗಿ ಒಂದು ಬಣ್ಣದ ಚಿಟ್ಟೆ
ಅದರ ಹಿಂದೆ ಹೋದರೆ ನೀ ಕೆಟ್ಟೆ

ಹಾರುವ ಹಕ್ಕಿಗೆ ಅಹಂಕಾರ
ಪ್ರೀತಿಸುವ ಹುಡುಗಿಗೆ ದುರಹಂಕಾರ

ಮಂಡ್ಯದ ಹುಲಿ
ಮುಟ್ಟಿದ್ರೆ ಬಲಿ

ನಲ್ಲೆಯ ನಲ್ಮೆಯ ನಗೆ
ನಲ್ಲನಿಗೆ full ಹೊಗೆ

ಆಟೋದವರಿಗೂ ಹಾರ್ಟಿದೆ, ಪ್ರೀತ್ಸೇ

ಪಾಪ ಪುಣ್ಯ ಹಳ್ಳೀಲಿ
ದುಡ್ಡಿದ್ರೆ ಬೆಂಗ್ಳೂರಲ್ಲಿ

ಅತ್ತೆ ಮಾವ ಆಶೀರ್ವಾದ
(೧೦೦% ಮನೆ ಅಳಿಯ, ಬಹುಶ: ಮಾವ ಗಾಡಿ ಕೊಡಿಸಿರಬೇಕು.)

ಲವ್ ಮಾಡಿದ್ರೆ ರೋಮ್ಯಾನ್ಸ್
ಕೈ ಕೊಟ್ರೆ ನಿಮ್ಹಾನ್ಸ್


ಮಂಡ್ಯದ ಗಂಡು

ಲೇ ಕಮಲಾ

ಹಾಯ್ ಕವಿತಾ

ಪಾಗಲ್ ಪರಂಧಾಮ

ಚಿಂದಿ ಗುರು

ಲೇ ಹುಡ್ಗೀರಾ,
LOVE ಅಂತ ಹತ್ರ ಬಂದ್ರೆ ಕೊಲೆ ಆಗ್ಹೋಗ್ತೀರಾ
ಸುಟ್ಟ್ ಹಾಕ್ತೀನಿ
ಹೊಗೆ ಹಾಕಿಸ್ಕೊಳ್ತೀರಾ


ಯಾರೋ ಆದಿ ಕವಿ ಪಂಪನ ಅಭಿಮಾನಿ:
ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಜಯನಗರಮಂ

ಇನ್ನು ಇಂಗ್ಲಿಷ್ ನಲ್ಲಿ ಏನೂ ಕಮ್ಮಿ ಇಲ್ಲ.
Love is slow poison

My Dad is my ATM

Mom say's no race

No fear

ಬರೆ ತಮಾಷೆಯ ಮಾತು ಮಾತ್ರವಲ್ಲ, ಕೆಲವೊಂದು ಗಹನವಾದ ವಿಚಾರಗಳನ್ನು ಬರೆದಿರುತ್ತಾರೆ.
Baby on board

Caution : I break for no apparent reason

Don't touch me, get back

Speed trills but kills

Drink coffee and drive
ಇದು Don't drink and drive ಗೆ ಪ್ರತಿಯಾಗಿ ಬರೆದಿದ್ದು ಅಂತ ಅನ್ನಿಸುತ್ತೆ. ಬಹುಶಃ ಕೊಡಗಿನ ಕಾಫಿ ಪ್ರಿಯರು ಬರೆದಿರಬಹುದು.

ಒಂದು "ಹಳೇ" ಟಾಟಾ ಎಸ್ಟೇಟ್ ಕಾರ್ ನ "ಹಿಂದೆ" ಬರ್ದಿದ್ದು :
May be little old, but still ahead of you

ಒಂದು ಸ್ಯಾಂಟ್ರೊ ಕಾರ್ ಹಿಂದೆ ಇದ್ದಿದ್ದು :
Honk if you are an IDIOT
ಇದು ನನಗೆ ತುಂಬಾ ಇಷ್ಟವಾಗಿದ್ದು, ನಿಜವಾದದ್ದು ಕೂಡಾ. ಅಗತ್ಯವಿಲ್ಲದಲ್ಲಿ ಶಬ್ದ ಮಾಡಿ ಶಬ್ದ ಮಾಲಿನ್ಯಕ್ಕೆ ತಮ್ಮ ಅಳಿಲ.... ಅಲ್ಲ ಅಲ್ಲ ಆನೆ ಸೇವೆ ಮಾಡುವವರಿಗೆ ಚಪ್ಪಲಿಯಲ್ಲಿ ಹೊಡೆಯೋ ಹಾಗಿದೆ, ಈ ಡೈಲಾಗ್.

ನೀವೂ ಇಂತಹ ಪಂಚ್ ಲೈನ್ ಗಳನ್ನು ಗಮನಿಸಿದ್ದೀರಾ ? ಬರೆದು ಕಮೆಂಟ್ ಹಾಕಿ.