25 February 2009

ಐಟಿಯವರ ಬಗ್ಗೆ ಇರೋ ತಪ್ಪು ಕಲ್ಪನೆ

ನಾನು ವಿಜಯ ಕರ್ನಾಟಕ ಪತ್ರಿಕೆಯ ಅಂಕಣಕಾರ ಪ್ರತಾಪ್ ಸಿಂಹ ಅವರ ಅಭಿಮಾನಿ. ಬರವಣಿಗೆ ಚೆನ್ನಾಗಿರುತ್ತೆ, ಹರಿತವಾಗಿರುತ್ತೆ. ವಿಕದಲ್ಲಿ ಬಂದ ಹೆಚ್ಚಿನ ಲೇಖನ ಓದಿದ್ದೀನಿ. ಆದ್ರೆ ಕಳೆದ ಶನಿವಾರ(21-02-2009) ಪ್ರಕಟವಾದ ಲೇಖನ ಓದಿ ಬೇಜಾರಾಯ್ತು.

ಈ ಲೇಖನ ಓದಿದ್ರೆ ತಿಳಿಯುತ್ತೆ, ಪ್ರತಾಪ್ ಗೆ ಐಟಿ ಬಗ್ಗೆ ಎಷ್ಟು ತಿಳಿದಿದೆ ಅಂತ. ಐಟಿಯಿಂದಾಗಿ ಎಷ್ಟು ಊಟ ಮಾಡ್ತಾ ಇದ್ದಾರೆ, ಐಟಿ ಬಿದ್ರೆ ಎಷ್ಟು ಜನರ ಕೆಲಸ ಹೋಗುತ್ತೆ ಅಂತ ಗೊತ್ತಿಲ್ಲ. ಕೇವಲ ಕೆಲವರನ್ನು ನೋಡಿ, ಹೇಳುವುದನ್ನು ಕೇಳಿ, generalize ಮಾಡಿ ಬರೆದಿದ್ದಾರೆ ಅನ್ನಿಸುತ್ತೆ. ನಾನೂ ಐಟಿ ಉದ್ಯೋಗಿ. ಸ್ವಲ್ಪ ಜನಾನ ನೋಡಿ ಎಲ್ಲರೂ ಹಾಗೇನೇ ಅನ್ನೋದು ತಪ್ಪು.

ಐಟಿಯಲ್ಲಿ ಎಲ್ಲರಿಗೂ 6 ಜೇಬುಗಳಲ್ಲಿ ದುಡ್ಡು ತುಂಬಿಸಿ ಕಳಿಸಲ್ಲ. ಕೆಲವರು 10 ಸಾವಿರ ರೂ.ಗೂ ಕಡಿಮೆ ದುಡಿಯುವವರು ಇದ್ದಾರೆ.

ಇಂದು ಐಟಿಯಲ್ಲಿ ಒಬ್ಬನಿಗೆ ಒಳ್ಳೆಯ ಸಂಬಳ ಸಿಗುತ್ತಿದೆ ಅಂದ್ರೆ ಅದು ಅವನ ವಿದ್ಯಾರ್ಹತೆ, ಜ್ಞಾನ, ಅನುಭವ, ಚಾಕಚಕ್ಯತೆ ಇವೆಲ್ಲವಕ್ಕೆ ಸಿಗುತ್ತಿರುವ ಫಲ. ಕಸುಬು ಕಲಿಯದಿದ್ರೆ ಒದ್ದು ಓಡಿಸುತ್ತಾರೆ. ಎಸ್ಸೆಸೆಲ್ಸಿಯಲ್ಲಿ ಫೇಲ್ ಆದವನು ನ್ಯಾಯಯುತವಾಗಿ ಅಷ್ಟು ಆದಾಯ ಪಡೆಯಲು ಸಾಧ್ಯವಿಲ್ಲ. ಅವನನ್ನು ಐಟಿ ಕಂಪನಿ ಸೇರಿಸಿಕೊಂಡು ಅಷ್ಟೇ ಸಂಬಳ ಕೊಡಬೇಕು ಅನ್ನೋದು ತಪ್ಪು. (ಎಸ್ಸೆಸೆಲ್ಸಿ ಫೇಲ್ ಆದವನು ದಡ್ಡ ಅಂತ ಅಲ್ಲ. ಅವನ ಪ್ರತಿಭೆ ಬೇರೆ ಇರಬಹುದು. ಆ ಕ್ಷೇತ್ರದಲ್ಲಿ ಮುಂದುವರಿದು ದುಡ್ಡು ಮಾಡಬಹುದು). ಐಟಿಯವರಿಗೆ ಬರುವ/ಇರುವ ದುಡ್ಡು ನ್ಯಾಯದ್ದು. ಆದಾಯ ತೆರಿಗೆ ಕೊಟ್ಟು ಉಳಿದದ್ದು. ಅಂದ್ರೆ White Money. ದಿನಕ್ಕೆ 10-12 ಗಂಟೆ ದುಡಿದು ಸಂಪಾದಿಸಿದ್ದು. ಅವರಿಗೆ ಅದನ್ನು ಹೇಗೆ ಬೇಕೋ ಹಾಗೆ ಖರ್ಚು ಮಾಡುವ ಅಧಿಕಾರ ಇದೆ. ಇದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಡ. ಹಾಗೇ ಉಳಿಸೋದು ಅವರವರ ವಿವೇಚನೆಗೆ ಬಿಟ್ಟಿದ್ದು. ಉಳಿಸಿದ್ರೆ ಅವರ ಕಷ್ಟ ಕಾಲಕ್ಕೆ ಬರುತ್ತೆ. ಐಟಿಯವರಿಗೆ ದುಡ್ಡು ಬರ್ತಾ ಇದೆ ಅಂತ ಮತ್ಸರ ಪಡೋದು ಅಥವಾ ಐಟಿ ಬಿತ್ತು ಅಂತ ಕೇಕೆ ಹಾಕಿ ನಗೋದು ಸರಿಯಲ್ಲ. ಐಟಿ ಬಿದ್ರೆ ಬೇರೆ ಎಲ್ಲಾ ಉದ್ಯಮಗಳಿಗೆ ಪೆಟ್ಟಾಗುತ್ತೆ. (ಅಮೆರಿಕಾದಲ್ಲಿ ಆಗಿರೋದನ್ನಾ ನೋಡಿದ್ರೆ ಗೊತ್ತಾಗುತ್ತೆ). "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ".

ಎಲ್ಲರೂ ಪ್ರತಿವಾರ Innova book ಮಾಡಿ trip ಹೋಗೋದಿಲ್ಲ. ನಾನು ವರ್ಷಕ್ಕೆ 2-3 ಸಲ ಹೋಗ್ತೀನಿ ಅಷ್ಟೆ. ಎಲ್ಲಾ ಐಟಿ ಉದ್ಯೋಗಿಗಳು 10-15 ಸಾವಿರ ಬಾಡಿಗೆ ಕೊಟ್ಟು 3BHK ಮನೆಯಲ್ಲಿ ಇರಲ್ಲ. 4-5 ಸಾವಿರ ಕೊಟ್ಟು ಕುಟುಂಬದವರ ಜತೆ ಸಣ್ಣ ಮನೆಯಲ್ಲೂ ಇರ್ತಾರೆ. ಇನ್ನು ಅವಿವಾಹಿತರು 3-4 ಜನ ಒಟ್ಟಾಗಿ ಇರ್ತಾರೆ, ದುಡ್ಡು ಉಳಿಸಬೇಕು, ಅಪ್ಪ-ಅಮ್ಮಂಗೆ ಕಳಿಸ್ಬೇಕು, ಅವರನ್ನು ನೋಡ್ಬೇಕು ಅಂತ. ಐಟಿಯಲ್ಲಿ ಇರೋರಿಗೆ ಎಲ್ಲರಿಗೂ 30-40 ಲಕ್ಷದ ಮನೆ/ಸೈಟ್ ತಗೋಳೋಕೆ ಆಗಲ್ಲ. ಕೆಲವರು ಆ ಕನಸನ್ನು ಬಿಟ್ಟಿದ್ದಾರೆ, ಮುಂದೂಡಿದ್ದಾರೆ ಅಥವಾ ತಮ್ಮ ಹಳ್ಳಿಯಲ್ಲಿ ಮನೆ/ಜಮೀನು ತಗೋತಾರೆ. ಎಲ್ಲರೂ ರೀಬಾಕ್ ಶೂ ಹಾಕಲ್ಲ, 200-300 ರೂ. ಚಪ್ಪಲಿ ಹಾಕ್ಕೊಂಡು ಆಫೀಸ್ ಗೆ ಹೋಗೋರು ತುಂಬಾ ಐಟಿ ಜನ ಇದ್ದಾರೆ.

ಇನ್ನು ಹಳ್ಳಿಯಲ್ಲಿ ಕಷ್ಟಪಟ್ಟು ಓದಿ ಐಟಿ ಸೇರಿದವರು ದುಂದುವೆಚ್ಚ ಮಾಡಲ್ಲ. ನಾನು ನೋಡಿದ ಹಾಗೆ ಇಲ್ಲಿನ ಸ್ಥಳೀಯ ಹಾಗೂ ಕರ್ನಾಟಕದ ಜನ ದುಂದು ವೆಚ್ಚ ಮಾಡೋದು ಬಹಳ ಕಡಿಮೆ. ಹೊರಗಿನಿಂದ ಬಂದು ಇಲ್ಲಿ ನೆಲಸಿದವರು, ಅಪ್ಪ-ಅಮ್ಮನಿಂದ ದೂರ ಇರೋರು, ಮೂಗು ದಾರ ಇಲ್ಲದಿರೋರು ಖರ್ಚು ಮಾಡ್ತಾರೆ. ತಿಂಗಳ ಕೊನೆಯಲ್ಲಿ ಅವರಲ್ಲಿ ದುಡ್ಡು ಇರೋಲ್ಲ.

ವಿದ್ಯಾಭ್ಯಾಸ ಮಾಡುತ್ತಿರುವಾಗ ಕೆಲವರ ಕೈಯಲ್ಲಿ ಸಾಕಷ್ಟು ದುಡ್ಡು ಇರೋದಿಲ್ಲ. ಬೇರೆ ದುಡ್ಡು ಇರೋರು ಖರ್ಚು ಮಾಡೋದು ನೋಡಿ ತಮಗೂ ಹಾಗೇ ಮಾಡ್ಬೇಕು ಅನ್ನಿಸುತ್ತೆ. ಆದ್ರೆ ಏನು ಮಾಡೋದು ? ಜೇಬು ಖಾಲಿ. ಆವಾಗ ಅವರು ಅಂದು ಕೊಳ್ತಾರೆ "ಓದು ಮುಗಿದ ಮೇಲೆ ಕೆಲಸಕ್ಕೆ ಸೇರ್ತೀನಿ, ಸಂಬಳ ಬರುತ್ತೆ, ನನಗೆ ಏನು ಬೇಕೋ ಕೊಳ್ಳುತ್ತೇನೆ" ಅಂತ. ಕೆಲಸ ಸಿಕ್ಕಿದ ಮೇಲೆ ಕನಸು ಕಂಡಿದ್ದನ್ನು ಕೊಳ್ಳುತ್ತಾನೆ, ಖರ್ಚು ಮಾಡುತ್ತಾನೆ. 3-4 ತಿಂಗಳುಗಳಾದ ಮೇಲೆ ಉಳಿತಾಯ ಮಾಡಬೇಕು ಅನ್ನೋದು ಗೊತ್ತಾಗುತ್ತೆ. ಮನೆ, ಮನೆಯವರು, ಮದುವೆ, ಮಕ್ಕಳು... ಹೀಗೆ ಜವಾಬ್ದಾರಿ ಬಂದ ಮೇಲೆ ಖಂಡಿತ ದುಂದು ವೆಚ್ಚ ಮಾಡಲ್ಲ. ಒಂದು ವೇಳೆ ಉಳಿತಾಯ ಮಾಡದಿದ್ರೆ ಮುಂದೆ ಅವನಿಗೇ ಕಷ್ಟ. ಇದು ಬರೇ ಐಟಿಯವರಿಗೆ ಮಾತ್ರ ಅಲ್ಲ, ಎಲ್ಲರಿಗೂ ಅನ್ವಯಿಸುತ್ತೆ.

ಪ್ರತಾಪ್ ಅವರು ಐಟಿಯವರು ಖರ್ಚು ಮಾಡೋದರ ಬಗ್ಗೆ ಬರಿತಾರೆ. non-IT ಶ್ರೀಮಂತರ ಮಕ್ಕಳ ಖರ್ಚಿನ ಬಗ್ಗೆ ಏಕೆ ಮಾತಿಲ್ಲ ? ನಡುರಾತ್ರಿ ಪಬ್ ಗಳಿಗೆ ಹೋಗಿ ಖರ್ಚು ಮಾಡೋರು ಐಟಿ ಉದ್ಯೋಗಿಗಳಲ್ಲ. ಇವರೆಲ್ಲಾ 15 ವರ್ಷಕ್ಕೆ ಕಾರಲ್ಲಿ ಓಡಾಡ್ತಾರೆ. ರಾತ್ರಿ 1-2 ಗಂಟೆಗೆ bike race ಮಾಡ್ತಾರೆ. ಒಂದೇ ಚಕ್ರದಲ್ಲಿ bike ಓಡಿಸಿ, ಕರ್ಕಶ ಶಬ್ದ ಮಾಡಿಸಿ Heart patientಗಳ ಜೀವ ತೆಗೀತಾರೆ, ನಮ್ಮ ನಿದ್ದೆ ಹಾಳು ಮಾಡ್ತಾರೆ. ಇವರು car-bike alteration ಮಾಡಲು ಸಾಕಷ್ಟು ವ್ಯಯಿಸುತ್ತಾರೆ. ಇವರ ಬಗ್ಗೆ ಏಕೆ ಬರೆಯಲ್ಲ ?

ಮುದ್ರಣ/ದೃಶ್ಯ ಮಾಧ್ಯಮಗಳಿಗೂ ಐಟಿಯಿಂದ ಸಾಕಷ್ಟು ಹೊಸ ತಂತ್ರಜ್ಞಾನ ಸಿಕ್ಕಿದೆ. ಕ್ಷಣಾರ್ಧದಲ್ಲಿ News/video edit ಮಾಡೋದಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆ ರವಾನೆಗೆ mic, camera, satellite, TV, computer, mobileನಲ್ಲಿ ಇರೋದು ಐಟಿಯವರು ಬರೆದ ತಂತ್ರಾಂಶವೇ. ಅದರಿಂದಾಗಿಯೇ ಅವರು "BREAKING NEWS" ಕೊಡಲು ಸಾಧ್ಯ.

ಬರೇ ಮಲೆನಾಡು ಅಲ್ಲ. ಪ್ರಪಂಚದ ಎಲ್ಲಾ ಕಡೆ ಕೂಲಿ(non-white-collar-job) ಕೆಲಸ ಮಾಡೋರು ಕಡಿಮೆಯಾಗುತ್ತಿದ್ದಾರೆ. ಅಮೆರಿಕಾದಲ್ಲಿ ಮನೆ ಕೆಲಸ ಮಾಡೋಕೆ, ಕಾರ್ ತೊಳೆಯೋಕೆ, ಶೌಚಾಲಯ ತೊಳೆಯೋಕೆ ಜನ ಸಿಗಲ್ವಂತೆ. ದಕ್ಷಿಣಕನ್ನಡದಲ್ಲಿ ಹೆಂಗಸರು ಮನೆಯಲ್ಲೇ ಕೂತು ಬೀಡಿ ಕಟ್ಟಿದ್ರೆ, ಗಂಡಸರು ಹತ್ತಿರದ ಪಟ್ಟಣಕ್ಕೆ ಹೋಗಿ driver, lift man ಅಥವಾ ಹೊಟೇಲ್ ನಲ್ಲಿ supplier ಕೆಲಸಕ್ಕೆ ಸೇರ್ತಾರೆ. ಹೊಲದಲ್ಲಿ ಬಿಸಿಲಲ್ಲಿ ಕೆಲಸ ಮಾಡೋಕೆ ಯಾರೂ ತಯಾರಿಲ್ಲ. ಈಗಂತೂ ವ್ಯವಸಾಯದಲ್ಲಿ ಏನೂ ಉಳಿಯಲ್ಲ. ಬೆಳೆದದ್ದು ಕೂಲಿ ಕೊಡೋಕೆ ಸರಿ ಆಗುತ್ತೆ. ಇದು 1988-2000ದ ಕಥೆ. ನಾನು ನೋಡಿದ್ದು. ಐಟಿ ಬಂದದ್ದು ಆಮೇಲೆ. ಐಟಿ ಬಂದಿದ್ದರಿಂದ ಕೂಲಿಗಳು ಸಿಗೋದಿಲ್ಲ ಅನ್ನೋದು ಸರಿಯಲ್ಲ.

ಐಟಿಯವರು ಉಳಿತಾಯ ಮಾಡಲ್ಲ ಅಂತ ಯಾರು ಹೇಳಿದ್ದು ? Bank FD, LIC, NSC, PF, PPFಗಳಲ್ಲಿ ಜಮೆ ಆದ ಹಣ ನೋಡಿ.

ಸ್ವಾಮಿನಿಷ್ಠೆ ಅನ್ನೋದು ಬರೇ ಐಟಿ ಅಲ್ಲ, ಯಾವ ಉದ್ಯಮದಲ್ಲೂ ಇಲ್ಲ. ಯಾರು ಹೆಚ್ಚುಕೊಡ್ತಾರೋ ಅಲ್ಲಿಗೆ ದೌಡು. ನಾಳೆ ಹೊಸ ಪತ್ರಿಕೆ/ಚಾನೆಲ್ ಆರಂಭ ಆದ್ರೆ, ಬೇರೆ ಹಳೆ ಪತ್ರಿಕೆ/ಚಾನೆಲ್ ನ ಅನುಭವಸ್ಥರನ್ನು ಜಾಸ್ತಿ ಸಂಬಳ ಕೊಟ್ಟು ಕರೆಸ್ತಾರೆ. ಸೀದಾ ಕಾಲೇಜ್ ನಿಂದ ಬಂದ ಹೊಸ ಮುಖಗಳನ್ನಾ ತಗೋಳಲ್ಲ. ನಮ್ಮೂರಲ್ಲಿ ಕೂಲಿ ಕೆಲಸದವರೂ ಅಷ್ಟೇ. ಹೆಚ್ಚು ಸಂಬಳ, ತಿಂಡಿ/ಚಹಾ ಕೊಡೋರ ಮನೆಗೆ ಕೆಲಸಕ್ಕೆ ಹೋಗ್ತಾರೆ. ಸರಕಾರಿ ಉದ್ಯೋಗಿಳದ್ದು ಸ್ವಾಮಿನಿಷ್ಠೆ ಅಲ್ಲ. 60 ವರ್ಷದ ವರೆಗೆ Job Security ಇದೆ ಮತ್ತು ನಿವೃತ್ತಿ ವೇತನ ಸಿಗುತ್ತೆ ಅಂತ ಅಲ್ಲಿದ್ದಾರೆ. ಅದು ಇಲ್ಲದಿದ್ರೆ ಅವ್ರೂ ಕೂಡಾ ಹೆಚ್ಚು ಕೊಡೋವಲ್ಲಿ ಹೋಗ್ತಾರೆ(ಎಲ್ಲರೂ ಅಲ್ಲ. ಕೆಲವರು ದೇಶಕ್ಕಾಗಿ ನಿಯತ್ತಿನಿಂದ ಕೆಲಸ/ಸಂಶೋಧನೆ/ಅಧ್ಯಾಪನ ಮಾಡೋರು ಇದ್ದಾರೆ). ಇಂದು ಐಟಿಯಲ್ಲಿ ಕೆಲಸಗಾರರು ಸ್ವಾಮಿನಿಷ್ಠೆ ತೋರಿಸಿದ್ರೆ, ನಾಳೆ ಕಂಪನಿ ತನ್ನ ಕೆಲಸಗಾರರಿಗೆ ಕೃತಜ್ಞವಾಗಿರುತ್ತೆ ಅಂತ ಹೇಳೋಕೆ ಆಗಲ್ಲ. ಯಾವಾಗ ಬೇಕಿದ್ರೂ ಮನೆಗೆ ಕಳಿಸಬಹುದು.

ಭಾರತದಲ್ಲಿ ಸಾಕಷ್ಟು Engineers ಇದ್ದಾರೆ. ಅಮೆರಿಕಾದವರಿಗಿಂತ ಕಡಿಮೆ ಸಂಬಳಕ್ಕೆ ದುಡಿತಾರೆ. ಅಮೆರಿಕಾದವರು ಇಲ್ಲಿಯವರಿಂದ ಕೆಲಸ ಮಾಡಿಸೋದಕ್ಕೆ ಐಟಿ ಉತ್ಪನ್ನಗಳ ಬೆಲೆ ಕಡಿಮೆ ಆಗಿದೆ. ಒಂದು ಮೊಬೈಲ್ ಕರೆಗೆ 40 ಪೈಸೆ, free SMS ಬಂದಿದೆ. ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಕೇವಲ ಅಮೆರಿಕಾದವರು ತಂತ್ರಾಂಶ ಬರೆದಿದ್ದರೆ ಇಂದು ಕೂಡಾ ಮೊಬೈಲ್ ಕರೆಗೆ 20 ರೂ. ಇರುತಿತ್ತು. ಜೊತೆಗೆ incomingಗೆ 10 ರೂ. ಇದರಿಂದ ಅಪ್ಪ-ಅಮ್ಮ ದೂರದಲ್ಲಿರುವ ತಮ್ಮ ಮಕ್ಕಳು-ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ, ಆರಾಮವಾಗಿ ಗಂಟೆಗಟ್ಟಲೆ ಮಾತಾಡಬಹುದು. Computer+Internet ಇದ್ದರೆ video chat ಕೂಡಾ ಮಾಡಬಹುದು. ಇದು ಈಗ ತುಂಬಾ ಅಗ್ಗವಾಗಿದೆ. ಇದು ಐಟಿಯಿಂದ ಜನಸಾಮಾನ್ಯನಿಗಾದ ಒಂದು ಸರಳ ಉಪಕಾರ. ಹೀಗೆ ಇನ್ನೂ ಪಟ್ಟಿ ಮಾಡಬಹುದು.

ನಮಗೆ ಐಟಿ ಬೇಡ ಅಂದಿದ್ರೆ ಅದು ಚೀನಾ ಅಥವಾ ಇನ್ನು ಯಾವುದೋ ದೇಶಕ್ಕೆ ಹೋಗುತಿತ್ತು. ನಷ್ಟ ಯಾರಿಗೆ ? ನಮಗೇ - ನಿರುದ್ಯೋಗ.

ಐಟಿ ಬಿದ್ರೆ, ಮೊದಲು ಕೆಲಸ ಕಳೆದುಕೊಳ್ಳೊದು HR, support staff, receptionist, watchmen, drivers, accountants ಅಮೇಲೆ Engineers ಮತ್ತು Managers. ಆಮೇಲೆ ಪ್ರಭಾವ ಆಗೋದು food, garment, banking industry ಮೇಲೆ.

ನೆನಪಿರಲಿ ಐಟಿಯವ ಕೆಲಸ ಕಳೆದುಕೊಂಡ್ರೆ ತೊಂದರೆ ಆಗೋದು ಅವನನ್ನು ನಂಬಿರುವ ಹೆತ್ತವರು ಮತ್ತು ಹೆಂಡತಿ ಮಕ್ಕಳಿಗೆ. ಆದ್ದರಿಂದ ಅದಕ್ಕೆ REJOICE ಮಾಡೋದು ತಪ್ಪು.

9 comments:

 1. Very Good article Shivanand.We have struggled a lot to reach this position and we IT Guys are educated and sensible enough to understand and tackle the situation.
  I completely disagree with pratapsimha artilce because its generalized artilce about 10-20% of IT Population.He should understand that we cannot come over the Recession by writing such sense less articles.

  ReplyDelete
 2. ಈ ವಿಷಯಕ್ಕೆ ಸಂಬಂಧಿಸಿದ ಇತರ ಲೇಖನಗಳು -

  ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ : http://guruve.blogspot.com/2009/02/blog-post_25.html


  ಪ್ರೀತಿಯಿಂದ ಪ್ರತಾಪ್ ಗೆ : http://kadalateera.blogspot.com/2009/02/blog-post_21.html

  ReplyDelete
 3. ನನ್ನ ಸ್ನೇಹಿತ ಕಳೆದವಾರ ತನ್ನ ಊರು ದಾವಣಗೆರೆಗೆ ಹೋಗಿದ್ನಂತೆ. ಅಲ್ಲಿ ಯಾರೋ Insurance/MF agent ತುಂಬಾ ಖುಷಿಯಿಂದ ಕೇಳಿದ್ನಂತೆ "ಐಟಿ ಬಿತ್ತಂತೆ ? ಪರ್ಮನೆಂಟಾಗಿ ದಾವಣಗೆರೆಗೆ ವಾಪಸ್ ಬಂದ್ರಾ ? ಒಂದು Insurance ಮಾಡಿ ಸಾರ್".
  (ಅವನು ತನ್ನ busuness ಮಾಡೋದು ಐಟಿ ಉದ್ಯೋಗಿಗಳ ಜೊತೆನೇ.)
  ಆದಕ್ಕೆ ಇವನು ಚೆನ್ನಾಗಿ ಬೈದು "ಒಂದು ವೇಳೆ ನನ್ನ ಕೆಲಸ ಹೋದ್ರೂನೂ, ಅದಕ್ಕಿಂತಮುಂಚೆ ನಿನ್ನ ಕೆಲಸ ಹೋಗುತ್ತೆ" ಅಂದ್ನಂತೆ. ಇವನು Insurance ಮಾಡ್ಸಿಲ್ಲ, ಅಲ್ಲಿ ಇರೋರಿಗೂ ಅವನ ಹತ್ರ Insurance ಮಾಡಿಸಬೇಡಿ ಅಂದ್ನಂತೆ.

  ಐಟಿಯಲ್ಲಿ ಕೆಲಸ ಸಿಗದೋರು, ಈಗ ಖುಶಿ ಪಡೊದು ಹೀಗೆ. ತನಗೆ ಸಿಗದ ದ್ರಾಕ್ಷಿ ಹುಳಿ ಅಂತ ನರಿ ಹೇಳಿದ ಹಾಗೆ.

  ReplyDelete
 4. ಚೆನ್ನಾಗಿ ಉತ್ತರಿಸಿ ಬರ್ದಿದೀರ ಪ್ರತಾಪ್ ಲೇಖನಕ್ಕೆ. ಪ್ರತಾಪ್ ತು೦ಬಾ generalize ಮಾಡಿ, ಪೂರ್ವಾಗ್ರಹ ಪೀಡಿತರಾಗಿ ಬರೆದಿದ್ದಾರೆ.

  ReplyDelete
 5. When Pratap wrote “homestay owners leave their homes to IT people and they themselves stay in sheds” I wrote to my contact in Madikeri, who coordinates homestays for tourists, for clarification on this issue-

  she wrote back- “what rubbish it is very easy to write and to talk : a pen and tongue both have no bones in them. Actually there are homestays where the people lend their entire house to the tourists, I don’t deny that but they will stay in their old house and the new house could be given to the tourists.
  I really don’t think such a thing will be there but I don’t know in what bases he might have written that.

  ReplyDelete
 6. ಈ ವಾರ ಏನು ಬರೆಯುತ್ತಾರೋ ಕಾದು ನೋಡಬೇಕಿದೆ...

  ReplyDelete
 7. ಇನ್ನೊಂದು :
  http://sampada.net/blog/chikku123/25/02/2009/17301a

  ReplyDelete
 8. ಟಿಪ್ಪಣಿ ಬರೆದವರೆಲ್ಲರಿಗೂ ಧನ್ಯವಾದಗಳು.

  ೨೨-೩೦ ವರ್ಷದವರು ಖರ್ಚು ಮಾಡೋದು ನೋಡಿದ್ರೆ ಅವನು ಐಟಿಯವನೇ ಇರಬೇಕು ಅನ್ನೋ ಭಾವನೆ ಜನಕ್ಕೆ ಬಂದಿದೆ. ಪಬ್, ಮಾಲ್, ಸಿನಿಮಾಗಳಿಗೆ ಹೋಗೋರು ಬರೇ ಐಟಿಯವರು ಅಂದು ಕೊಂಡಿದ್ದಾರೆ. ಮಂಗಳೂರಲ್ಲಿ ಪಬ್ ಇದೆ. ಮಂಗಳೂರು, ಉಡುಪಿಗಳಲ್ಲಿ ಬಿಗ್ ಬಜಾರ್ ಇವೆ. ಅಲ್ಲೆಲ್ಲಾ ವ್ಯಾಪಾರ ಆಗೋದು ಐಟಿಯವರಿಂದ ಅಲ್ವಲ್ಲಾ ? ಬೇರೆ ವ್ಯವಹಾರ ಮಾಡೋರು ಕೆಲವರು ಐಟಿಯವರಿಗಿಂತ ಜಾಸ್ತಿ ಆದಾಯ ಮಾಡ್ತಾರೆ, ಖರ್ಚು ಮಾಡ್ತಾರೆ. ಅಂತಹವರ ಮಕ್ಕಳನ್ನು ಹಿಡಿಯೋದೇ ಕಷ್ಟ. ಆದರೆ ನೋಡಿದವರು ಇವರೆಲ್ಲಾ ಐಟಿಯವರೇ ಅಂತಾರೆ.

  ನನ್ನ ಸ್ನೇಹಿತರು ಕೆಲಸದ ನಿಮಿತ್ತ ವಿದೇಶಗಳಿಗೆ ಹೋಗೋವಾಗ, ಅವರನ್ನು ಬಿಡಲು ೩-೪ ಸಲ ನಡುರಾತ್ರಿ ಹಳೇ ವಿಮಾನನಿಲ್ದಾಣಕ್ಕೆ ಹೋಗಿದ್ದೆ. ದಾರಿಯಲ್ಲಿ ರೆಸಿಡೆನ್ಸಿ ರಸ್ತೆಯಲ್ಲಿ ಪಬ್ ಗಳ ಆಸು ಪಾಸು ತುಂಬಾ ಜನ ಹುಡುಗ ಹುಡುಗಿಯರನ್ನು ನೋಡಿದ್ದೆ. ಹೆಚ್ಚಿನವರು ೧೮-೨೦ ವರ್ಷದವರು. ದೊಡ್ಡ ದೊಡ್ಡ ಕಾರುಗಳಲ್ಲಿ ಬಂದವರು. ವಾರದ ಮಧ್ಯೆ ಐಟಿಯವರು ಹಗಲಲ್ಲಿ ಕಚೇರಿಯಲ್ಲಿ ದುಡಿದು, ರಾತ್ರಿ ಅಲ್ಲಿ ಹೋಗಿ ಕುಣಿಯೋಕೆ ಸಾಧ್ಯನಾ ?

  ಮೊನ್ನೆ ಒಂದು ದಿನ ನಮ್ಮ ಕಂಪನಿಯ ತಂಡದ ಜೊತೆ ಐನಾಕ್ಸ್ ಗೆ ಸಿನಿಮಾ ನೋಡಲು ಹೋಗಿದ್ದೆ.(ಈ ವರೆಗೆ ಒಂದೇ ಸಲ ಅಲ್ಲಿ ಹೋಗಿದ್ದು ನಾನು). ವಾರದ ಮಧ್ಯೆ, ೩ ಘಂಟೆಗೆ. ಅಲ್ಲಿ ಸಿನಿಮಾ ನೋಡಲು ಬಂದವರು ಹಾಗೂ ಅಲ್ಲಿನ ಮಾಲ್ ಗಳಲ್ಲಿ ತಿರುಗಾಡುತ್ತಿದ್ದವರಲ್ಲಿ ಹೆಚ್ಚಿನವರು ೨೦ ವರ್ಷಕ್ಕಿಂತ ಕೆಳಗಿನವರು. ಬೆನ್ನ ಮೇಲೆ ಚೀಲ ಹಾಕಿ ಬಂದವರು. ಬಹುಷಃ ಇವರೆಲ್ಲಾ ಶಾಲೆಗೆ ಚಕ್ಕರ್ ಹಾಕಿ ಬಂದವರಿರಬೇಕು. ಮತ್ತೆ ಕೆಲವರು ೪೦ ವರ್ಷಕ್ಕಿಂತ ಮೇಲಿನವರು. ಅವರನ್ನು ನೋಡಿದ್ರೆ ಗೊತ್ತಾಗುತ್ತೆ ಅವರು ಎಷ್ಟು ದುಡ್ಡಿರೋರು ಅಂತ. ವಾರಾಂತ್ಯದಲ್ಲಿ ಸ್ವಲ್ಪ ಐಟಿಯವರು ಹೋಗಬಹುದು, ಗೊತ್ತಿಲ್ಲ. ಆದರೆ "ಅಲ್ಲಿ ಹೋಗೋರೆಲ್ಲ ಐಟಿಯವರು" ಅಂತ ಜನರ ಅನಿಸಿಕೆ.

  ಜನಸಾಮಾನ್ಯ ಓದೋದು ಕನ್ನಡ ದಿನಪತ್ರಿಕೆ. ಅದರಲ್ಲಿ ಬಂದಿದ್ದೆಲ್ಲಾ ಸತ್ಯ ಅಂದುಕೊಳ್ತಾನೆ. ಇನ್ನಷ್ಟು ಜನಕ್ಕೆ ಹೇಳ್ತಾನೆ. ಉದ್ಯಾನವನಕ್ಕೆ ವಾಯುವಿಹಾರಕ್ಕೆ ಹೋದ ಜನ ಕಲ್ಲಿನ ಆಸನದ ಮೇಲೆ ಕೂತು ಇಂತಹ ವಿಷಯಗಳನ್ನೇ ಹರಟುತ್ತಿರುತ್ತಾರೆ. ಜನ ತಪ್ಪು ತಿಳಿದುಕೊಂಡಾಗ ಸ್ಪಷ್ಟೀಕರಣ ಕೊಡೋದು ಅಗತ್ಯ ಅನ್ನಿಸಿತು. ಅದಕ್ಕೆ ಇಷ್ಟೆಲ್ಲಾ ಬರೆದೆ. ಎಷ್ಟು ಜನಕ್ಕೆ ತಲಪುತ್ತೆ ಗೊತ್ತಿಲ್ಲ.

  ಐಟಿಯವರನ್ನು ದೇವರು ಅಂತ ಪೂಜೆ ಮಾಡೋದು ಬೇಡ. ಆದರೆ ಆದ ಎಲ್ಲಾ ತೊಂದರೆಗೆ ಐಟಿಯೇ ಕಾರಣ ಅಂತ ದೂಷಿಸುವುದು ಒಪ್ಪತಕ್ಕದ್ದಲ್ಲ.

  ReplyDelete
 9. ಈ ವಿಷಯದ ಬಗ್ಗೆ ಇನ್ನೂ ಕೆಲವು ಲೇಖನಗಳು:

  # ಪ್ರತಾಪ ಸಿ೦ಹರ ITಯ ಕುರುಡು ಕಾ೦ಚಾಣದ ಬಗ್ಗೆ... - ಶ್ರೀ
  http://avalokana.blogspot.com/2009/02/blog-post.html


  # ಪ್ರತಾಪ್ ಸಿ೦ಹ ರ "ಕುರುಡು ಕಾ೦ಚಾಣ.." ಹಾಗೂ ನನ್ನ ಒ೦ದೆರಡು ಮಾತುಗಳು - ನಾಗಪ್ರಸಾದ್ ಎನ್. ಎಸ್
  http://nsworld.wordpress.com/2009/02/22/%E0%B2%AA%E0%B3%8D%E0%B2%B0%E0%B2%A4%E0%B2%BE%E0%B2%AA%E0%B3%8D-%E0%B2%B8%E0%B2%BF%E0%B2%82%E0%B2%B9-%E0%B2%B0-%E0%B2%95%E0%B3%81%E0%B2%B0%E0%B3%81%E0%B2%A1%E0%B3%81-%E0%B2%95%E0%B2%BE%E0%B2%82/


  # ಐಟಿ ಉದ್ಯೋಗಿಗಳು anti social element ಗಳಲ್ಲ - ಶ್ವೇತ
  http://shwethahp.blogspot.com/2009/03/anti-social-element.html

  # ಕೆಂಡಸಂಪಿಗೆ
  http://www.kendasampige.com/article.php?id=2164

  ReplyDelete